ಬಳ್ಳಾರಿ ಜು,16
ಯಾವುದೇ ಕಾರಣಕ್ಕೂ ನರೇಗಾ ಯೋಜನೆಯ ಕಾಮಗಾರಿ ನಿಲ್ಲಿಸ ಸಬಾರದು ಎಂದು ಡಿವೈಎಫ್ ಐ ತೋರಣಗಲ್ಲು ಘಟಕದ ಮುಖಂಡ ಸ್ವಾಮಿ ತಿಳಿಸಿದರು. ಕೂಲಿಕಾರರು ಗುಳೆ ಹೋಗಬಾರದು ಎಂಬ ಕಾರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಿತ್ತು. ಆದರೆ ಇದೀಗ ಕೇಂದ್ರ ಸರ್ಕಾರ ರಾಮ್ ಜಿ ಯೋಜನೆ ಜಾರಿಗೊಳಿಸಿ ಬಡ ಬಗ್ಗರ ಹೊಟ್ಟೆ ಮೇಲೆ ಬರೆ ಎಳೆದಿದೆ.
ಇದರಿಂದ ಬಡಪಾಯಿಗಳು ಹಸಿವಿನಿಂದ ಒದ್ದಾಡುತ್ತಿದ್ದಾರೆ. ಕಾರಣ ಕೂಡಲೇ ಕೇಂದ್ರ ಸರ್ಕಾರ ಉಳ್ಳವರ ಹೊಟ್ಟೆಯನ್ನು ತುಂಬಿಸುವ ಬದಲಿಗೆ ಬಡವರ ಹಸಿವನ್ನು ನೀಗಿಸಬೇಕೆಂದು ಒತ್ತಾಯಿಸಿ ತೋರಣಗಲ್ಲ
ಪಿ ಡಿಒ ಹನುಮಂತಪ್ಪ ಇವರಿಗೆ ಮನವಿ ಪತ್ರ ಸಲ್ಲಿಸಿದರು.
ಪಿಡಿಒ ಈ ಬಗ್ಗೆ ಪ್ರತಿಕ್ರಿಯಿಸಿದ ಹನುಮಂತಪ್ಪ ಮಾಗಿ ನೀವು ಕೊಟ್ಟ ಬೇಡಿಕೆಯನ್ನು ಮಾನ್ಯ ಜಿಲ್ಲಾಧಿಕಾರಿಗಳಿಗೆ ಕಳಿಸಿಕೊಡುತ್ತೇವೆ ಭರವಸೆ ನೀಡಿದರು. ಇದಕ್ಕೂ ಬಗ್ಗದ ಯುವ ಸಂಘಟನೆಯ ಮುಖಂಡರು
ಡಿ.ವೈ.ಎಫ್.ಐ ಸಂಘಟನೆಯು ಸ್ಥಳೀಯವಾಗಿ ಬೃಹತ್ ಕೈಗಾರಿಕೆಗಳು ಬೆಳೆದರೂ ಕೂಡ ಗ್ರಾಮದ ಬಡಜನರು ಸರಿಯಾದ ಉದ್ಯೋಗ, ಆರೋಗ್ಯ, ಶಿಕ್ಷಣವಿಲ್ಲದೆ ಪರದಾಡುತ್ತಿದ್ದಾರೆ.
ಅದೇ ರೀತಿ ಅನೇಕ ಜನಸಾಮಾನ್ಯರು ಬಹುತೇಕ ಮಹಿಳೆ ಕಾರ್ಮಿಕರು ಸೇರಿದಂತೆ ಉದ್ಯೋಗ ಖಾತ್ರಿ ಕೆಲಸದ ಮೇಲೆ ಅವಲಂಬಿತರಾಗಿರುತ್ತಾರೆ.ಅಂತಹ ಎಲ್ಲ ಉದ್ಯೋಗ ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಈ ಕೂಡಲೇ ಉದ್ಯೋಗ ನೀಡಬೇಕು.ಮತ್ತು ಈ ಕೆಳಗಿನಂತೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಈ ಮೂಲಕ ಡಿ.ವೈ.ಎಫ್.ಐ ಒತ್ತಾಯ ಮಾಡುತ್ತದೆ
*ಬೇಡಿಕೆಗಳು*
1.ಗ್ರಾಮದ ಎಲ್ಲಾ ಕಾರ್ಮಿಕರಿಗೆ ವಿ.ಬಿ.ರಾಮಜಿ ಯೋಜನೆಗೆ ಬರುವ ಕಾನೂನುಗಳನ್ನು ಜಾರಿ ಮಾಡಬೇಕು ಮತ್ತು ಕೂಡಲೇ ಕೆಲಸ ನೀಡಬೇಕು.
ಈ ಹಿಂದೆ ಕೆಲಸ ಮಾಡಿದ ಕಾರ್ಮಿಕರಿಗೆ ಸರಿಯಾಗಿ ಕೂಲಿ ನೀಡಿರುವುದಿಲ್ಲ.ಇದನ್ನು ಪರಿಶೀಲಿಸಿ ಬಾಕಿಯಿರುವ ಕೂಲಿ ಹಣವನ್ನು ಕೂಡಲೇ ಬ್ಯಾಂಕಿಗೆ ಜಮಾ ಮಾಡಬೇಕು.
ಗ್ರಾಮ ಪಂಚಾಯಿತಿ ಪಕ್ಕದಲ್ಲಿರುವ ಆರ್ ಓ ವಾಟರ್ ಪ್ಲಾಂಟ್ ನ್ನು ತಮ್ಮ ಪಂಚಾಯತಿಗೆ ವಶಪಡಿಸಿಕೊಂಡು ಸಾರ್ವಜನಿಕರಿಗೆ ನೀರಿನ ವ್ಯವಸ್ಥೆ ಮಾಡಬೇಕು ಮತ್ತು ಉಳಿದ ಆರ್ ಓ ಪ್ಲಾಂಟ್ ಗಳನ್ನು ಪರಿಶೀಲಿಸಿ ಏನಾದರೂ ರಿಪೇರಿ ಇದ್ದಲ್ಲಿ ಸರಿಪಡಿಸಿಕೊಡಬೇಕು.
ಜೆ.ಜೆ.ಎಂ. ಯೋಜನೆಯಲ್ಲಿ ಎಲ್ಲಾ ವಾರ್ಡ್ ಗಳಲ್ಲಿ ಗುಂಡಿ ತೆಗೆದು ಪೈಪು ಲೈನ್ ಮಾಡಿದ ನಂತರ ಎಲ್ಲಾ ಕಾಂಕ್ರೀಟ್ ಸಿಸಿ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು. ಸಾರ್ವಜನಿಕರಿಗೆ ತುಂಬಾ ತೊಂದರೆಗಳಾಗುತ್ತಿದ್ದು ಕೂಡಲೇ ಸರಿಪಡಿಸಿ ಸಿಸಿ ರಸ್ತೆ ನಿರ್ಮಿಸಬೇಕು ಮತ್ತು ತ್ವರಿತಗತಿಯಲ್ಲಿ ಸಮರ್ಪಕವಾಗಿ ನೀರಿನ ಸರಬರಾಜು ಮಾಡಬೇಕು.
ಗ್ರಾಮದಲ್ಲಿ ಹದಗೆಟ್ಟಿರುವ ಎಲ್ಲಾ ಚರಂಡಿಗಳನ್ನು ನಿರಂತರವಾಗಿ ಶುಚಿಗೊಳಿಸಿ ಕ್ರಿಮಿ ಕೀಟಗಳು ಬರದಂತೆ ನೋಡಿಕೊಳ್ಳಬೇಕು ಮತ್ತು ಬೀಚಿಂಗ್ ಪೌಡರ್ ಹಾಕಬೇಕು.
ಕಾಲುವೆ ಗುಡ್ಡದ ಪಕ್ಕದಲ್ಲಿ ವಾಸ ಮಾಡುತ್ತಿರುವ ಎಲ್ಲಾ ಕುಟುಂಬಗಳಿಗೆ ನಿರಂತರವಾಗಿ ಬಳಕೆ ನೀರಿನ ಸರಬರಾಜು ಮತ್ತು ಕಸ ವಿಲೆಮಾರಿ ಮಾಡಬೇಕು ಎಂದು ಪಟ್ಟು ಹಿಡಿದು ಕುಳಿತರು. ಪ್ರತಿಕ್ರಿಸಿದ ಪಿಡಿಒ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ಕೈಗೊಳ್ಳುತ್ತೇವೆ ಎಂಬ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ
*DYFI ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಸ್ವಾಮಿ*,
*ತಾಲೂಕು ಕಾರ್ಯದರ್ಶಿ ನಾಗಭೂಷಣ*
*ಕರ್ನಾಟಕ ರಾಜ್ಯ ದೇವದಾಸಿ ವಿಮೋಚನಾ ಮಹಿಳೆರ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ*
*ಉದ್ಯೋಗ ಖಾತ್ರಿ ಕಾರ್ಮಿಕ ಮುಖಂಡರಾದ ಮರಿಯಮ್ಮ, ಶಕುಂತಲಾ, ಹುಲಿಗೇಮ್ಮ, ಕುಮಾರಿ,ನೀಲಮ್ಮ, ಸುಶಿಲಮ್ಮ,ವಂಡ್ರಮ್ಮ, ದುರುಗಮ್ಮ, ನಿಂಗಮ್ಮ ಸೇರಿದಂತೆ ನೂರಾರು ಜನ ಕೂಲಿಕಾರ್ಮಿಕರು ಇದ್ದರು.






