ಸಿರಿಗೇರಿ ಸುದ್ದಿ ಮೇ 30
ಮಳೆ ಬೆಳಗಾಗಿ ಪ್ರಾರ್ಥಿಸಿ ಇಲ್ಲಿನ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಸಪ್ತ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಭಾನುವಾರ ಬೆಳಗಿನ ಜಾವದಿಂದಲೇ ಸಿದ್ಧತೆಗೊಂಡ ಭಜನಾ ತಂಡದ ಸಿರಿಗೇರಿ, ಕ್ಯಾದಿಗೆಹಾಳು, ಮುದ್ದಟನೂರು, ಹಾವಿನ ಹಾಳು, ಕೊಂಚಿಗೇರಿ ಸೇರಿದಂತೆ ಸುಮಾರು ಹತ್ತಾರು ಹಳ್ಳಿಯ ಭಜನಾ ತಂಡಗಳು ಮಡಿ ಸ್ನಾನ ಮಾಡಿ, ಮಡಿ ವಸ್ತ್ರದೊಂದಿಗೆ ಓಂ ನಮಃ ಶಿವಾಯ ಎಂಬ ವೇದವಾಕ್ಯದೊಂದಿಗೆ ದೇವರಲ್ಲಿ ಪ್ರಾರ್ಥಿಸಿ ಭಜನೆ ನಡೆಸಿದರು. ಈ ಸಪ್ತ ಭಜನೆ ಹಗಲು ರಾತ್ರಿ ಎನ್ನದೆ ನಿರಂತರವಾಗಿ ನಡೆಯಿತು. ಮರುದಿನ ಹಿರಿಯರ ಪದ್ಧತಿಯಂತೆ ಅನ್ನದಾಸೋಹ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ನೂರಾರು ಭಕ್ತಾದಿಗಳು ಭಾಗವಹಿಸಿದ್ದರು.






