ಸಿರಿಗೇರಿ ಜೂ, 9: ಸಿರಿಗೇರಿ ಗ್ರಾಮಸ್ಥರು, ಕುರಿಗಾಹಿಗಳು, ರೈತಾಪಿ ವರ್ಗದ ಜನ ಮಳೆ ಬೆಳಗಾಗಿ ಪ್ರಾರ್ಥಿಸಿ ತೆಕ್ಕಲಕೋಟೆ ರಸ್ತೆಯ ಮಾರಮ್ಮ ದೇವಿಗೆ ವಿಶೇಷ ಪೂಜೆ ನೈವೇದ್ಯ ಸಲ್ಲಿಸಿದರು.
ಬೆಳಗಿನ ಜಾವದಿಂದಲೇ ಸಿದ್ಧತೆಗೊಂಡ ಸಿರಿಗೇರಿ ಗ್ರಾಮಸ್ಥರು ನೈವೇದ್ಯ ತಯಾರಿಸಿ, ಎಲೆ ಪೂಜೆ ಕಾರ್ಯ ನೆರವೇರಿಸಿದರು. ತದನಂತರ ಧಾರ್ಮಿಕ ವಿಧಿ ವಿಧಾನ ಪದ್ದತಿಯೊಂದಿಗೆ ಮಾರೆಮ್ಮ ದೇವಿಗೆ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.
ಪ್ರತಿವರ್ಷದಂತೆ ನಡೆಯುವ ಈ ಕಾರ್ಯಕ್ರಮದಲ್ಲಿ ಜಾತಿ ಮತ ಪಂಥ ಭೇದವಾಗುವಿಲ್ಲದೆ ಎಲ್ಲಾ ಜನಾಂಗದವರು ಕೂಡ ಒಗ್ಗಟ್ಟಾಗಿ ಅನ್ನದಾಸೋಹ ನಡೆಸಿದ್ದು ವಿಶೇಷತೆಯಾಗಿತ್ತು. ಈ ಸಂದರ್ಭದಲ್ಲಿ ಸುಮಾರು ನೂರಾರು ಜನ ಭಕ್ತಾದಿಗಳು ಭಾಗವಹಿಸಿದ್ದರು.






