ಸಿರಿಗೇರಿ ಮೇ15: ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಆಸ್ಪತ್ರೆ ಹಾಗೂ ಸಿರಿಗೇರಿ ಕೇಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಭಾಗಿತ್ವದೊಂದಿಗೆ ಕಣ್ಣಿನ ಉಚಿತ ತರಬೇತಿಗಳನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಿವಮೊಗ್ಗದ ಡಾ : ಸುನಿಲ್ ಕುಮಾರ್ ಶಾರೀರಿಕವಾಗಿ ಮನುಷ್ಯನಿಗೆ ಬೇಕಾದ್ದು ಕಣ್ಣಿನ ಅಂಗ ಅತ್ಯಗತ್ಯ. ಕಣ್ಣು ಇಲ್ಲದಿದ್ದರೆ ಪ್ರಪಂಚವೇ ಶೂನ್ಯ ಎಂದು ತಿಳಿಸಿದರು. ಸಿರಿಗೇರಿ ಗ್ರಾಮದ ವ್ಯಾಪ್ತಿಯ ಮುದ್ದಟನೂರು, ಶಾನವಾಸಪುರ,ಕೊಂಚಿಗೇರಿ, ಉತ್ತನೂರು, ಕರೂರು, ಎಂ ಸೂಗೂರು, ನಡವಿ, ನಿಟ್ಟೂರು, ಸೇರಿದಂತೆ ಸುಮಾರು ನೂರಾರು ಜನ ಉಚಿತ ಕಣ್ಣಿನ ತಪಾಸಣೆಗೆ ಒಳಗಾದರು.
ಇದೇ ವೇಳೆ ಶಸ್ತ್ರಚಿಕಿತ್ಸೆಗೆ ಸುಮಾರು 86 ಜನ ಶಿವಮೊಗ್ಗ ಆಸ್ಪತ್ರೆಗೆ ದಾಖಲಾದರು. ತಪಾಸಣೆ ವೇಳೆಯಲ್ಲಿ ಶಂಕರ ಕಣ್ಣಿನ ಆಸ್ಪತ್ರೆಯ ಡಾ : ಪ್ರತ್ಯುನ್ಯ, ಸುನಿಲ್ ಕುಮಾರ್, ಕೃಷ್ಣ,ಡಾ : ನಾಗರಾಜ ಪೂಜಾರಿ,ಆರೋಗ್ಯ ನಿರೀಕ್ಷಣಾಧಿಕಾರಿ ಶಿವಾನಂದಪ್ಪ, ಕೃಷ್ಣ,ಸತೀಶ, ಗಂಗಮ್ಮ, ಸಾಧಕಲಿ,ಶೃತಿ, ಷಣ್ಮುಖ, ಅರುಣ ಕುಮಾರಿ, ಆಶಾ ಕಾರ್ಯಕರ್ತರು ಸೇರಿದಂತೆ ಸುಮಾರು ನೂರಾರು ಜನ ಇದ್ದರು.






