ಸಿರಿಗೇರಿ ಏ,30 ; ಶಿರುಗುಪ್ಪ ತಾಲೂಕಿನ ಗೋಸಬಾಳು ಗ್ರಾಮದ ಬಹಳ ಪುರಾತನ ಕಾಲದ ಇತಿಹಾಸ ಪ್ರಸಿದ್ಧ ಶ್ರೀ ಮರಿಲಿಂಗೇಶ್ವರ ದೇವಸ್ಥಾನ ಕಳೆದ 45 ವರ್ಷದಿಂದ ಪಾಳು ಬಿದ್ದಿತ್ತು. ಇದನ್ನು ಮನಗಂಡ ಅಲ್ಲಿನ ಸ್ಥಳೀಯ ಹಾಲುಮತ ಸಮುದಾಯದವರು ಹಾಗೂ ಸದ್ಭಕ್ತ ಗ್ರಾಮದ ಗಣ್ಯಮಾನ್ಯರು ಸ್ವಯಂ ಪ್ರೇರಿತರಾಗಿ ಸಹಾಯ ಸಹಕಾರ ನೀಡಿ ಮರ್ಲಿಂಗೇಶ್ವರ ದೇವಸ್ಥಾನವನ್ನು ಉನ್ನತೀಕರಣ ಗೊಳಿಸಿದ್ದಾರೆ.
*ಅದ್ದೂರಿ ಮೆರವಣಿಗೆ*
ಇದರ ಪೂರ್ವಭಾವಿಯಾಗಿ ಗ್ರಾಮದ ಎಲ್ಲಾ ಸರ್ವ ಸದ್ಭಕ್ತ ಮಂಡಳಿಯವರು ಮಹಿಳೆಯರು ಬೆಳಗಿನ ಜಾವದಿಂದಲೇ ತಯಾರಾಗಿ ನೂತನವಾಗಿ ನಿರ್ಮಿಸಿದ ದೇಗುಲಕ್ಕೆ ಧಾರ್ಮಿಕ ವಿಧಿ ವಿಧಾನಗಳನ್ನು ಆಚರಿಸಿ, ಡೊಳ್ಳು ವಾದ್ಯ ಮೆರವಣಿಗೆಯೊಂದಿಗೆ ನೂರಾರು ಜನ ಮಹಿಳೆಯರು ಕಳಸ ಹೊತ್ತು ಮೆರವಣಿಗೆ ಮೂಲಕ ಮರಿಲಿಂಗೇಶ್ವರ ದೇವಸ್ಥಾನಕ್ಕೆ ತಲುಪಿದರು. ಆನಂತರ ದೇವರಿಗೆ ನೈವೇದ್ಯ ಅರ್ಪಿಸಿ ಎಲ್ಲಾ ಭಕ್ತಾದಿಗಳು ದೇವರ ಕೃಪೆಗೆ ಪಾತ್ರರಾದರು.

ಇದೇ ವೇಳೆ ಅನ್ನ ದಾಸೋಹ ಸಂತರ್ಪಣೆ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಎಲ್ಲಾ ಗಣ್ಯರು, ಗ್ರಾಮ ಪಂಚಾಯಿತಿ ಆಡಳಿತ ವರ್ಗ, ನೂರಾರು ಜನ ಭಕ್ತಾದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
.






