ವಿಶೇಷ ವರದಿ ಎನ್ ರಾಜಕುಮಾರ್
ಸಮೀಪದ ಗುಂಡಿಗನೂರು ಕೆರೆ ಬತ್ತಿ ಹೋಗಿದ್ದು ಮೀನುಗಾರರ ಸ್ಥಿತಿ ಅಸ್ತವ್ಯಸ್ತಗೊಂಡಿದೆ. ಬಳ್ಳಾರಿ ಜಿಲ್ಲೆಯ್ಯಾದ್ಯಂತ ಹೇಮಾವತಿ ನದಿ, ತುಂಗಭದ್ರಾ ನದಿ, ಗುಂಡಿಗನೂರು ಕೆರೆ, ಮಾಳಾಪುರ ಕೆರೆ, ಮೀನುಗಾರರ ವೃತ್ತಿಯನ್ನೇ ನಂಬಿಕೊಂಡಿರುವ ಮೀನುಗಾರರ ಜೀವನ ಬರಗಾಲದಿಂದ ನೀರಿಲ್ಲದೆ ತತ್ತರಿಸಿದ್ದಾರೆ. ಸುಮಾರು ಬಳ್ಳಾರಿ ಜಿಲ್ಲೆಯ್ಯಾದ್ಯಂತ ಸಾವಿರಾರು ಜನ ಮೀನುಗಾರರ ಕುಟುಂಬಗಳು ವೃತ್ತಿಜೀವನ ನಡೆಸದೆ ಕಂಗಲಾಗಿದ್ದಾರೆ.
ದುಷ್ಪರಿಣಾಮ :
ಇಂತಹ ವೃತ್ತಿಯನ್ನು ಅವಲಂಬಿಸಿದ ಮೀನುಗಾರರ ವೃತ್ತಿ ಕಾರ್ಮಿಕರು ಇತ್ತ ಕಡೆ ಉದ್ಯೋಗ ಖಾತ್ರಿಯು ಇಲ್ಲ. ಮತ್ತೊಂದೆಡೆ ಮೀನುಗಾರಿಕೆಯ ವೃತ್ತಿಯೂ ಇಲ್ಲ. ಮಳೆ ಕೈ ಕೊಟ್ಟ ಕಾರಣ ಬಹುತೇಕ ಎಲ್ಲಾ ಕೆರೆಗಳು ಬತ್ತಿ ಹೋಗಿವೆ. ಕುಟುಂಬದ ನಿರ್ವಹಣೆಗಾಗಿ.ಬೇಸತ್ತ ಮೀನುಗಾರರು ಬೆಂಗಳೂರು, ಹಾಸನ, ಆಂಧ್ರಪ್ರದೇಶದ ಗುಂಟೂರು, ಕರ್ನೂಲು, ಅನಂತಪುರ, ಸೇರಿದಂತೆ ಮೀನುಗಾರರ ಕುಟುಂಬದವರು ಗುಳೆ ಹೋಗುವುದು ಅನಿವಾರ್ಯತೆ ಉಂಟಾಗಿದೆ.
ಸಂಬಂಧಿಸಿದ ಮೀನುಗಾರರಿಗೆ ಮತ್ತು ಕುಟುಂಬ ವರ್ಗಕ್ಕೆ ಮೀನುಗಾರರ ಇಲಾಖೆ ಜರೂರಾಗಿ ಆರ್ಥಿಕ ಸೌಲಭ್ಯ ಒದಗಿಸಿ ಕೊಡಬೇಕಾದ ಅಗತ್ಯವಿದೆ.






