ವಿಶೇಷ ವರದಿ:ಎನ್. ರಾಜ್ ಕುಮಾರ್
ಗೆಜ್ಜೆಯನಾದಕ್ಕೆ ಕುಣಿತ. ಹೃದಯದ ಮಿಡಿತವೇ ಇವರ ತಾಳ. ಕಲಾ ರಂಗದ ಭೂಮಿಯೇ ಇವರ ದೇವಾಲಯ. ಇದು ಬರೀ ಕಥೆಯಲ್ಲ ಒಬ್ಬ ಬಯಲಾಟ ಕಲಾವಿಧನ ವ್ಯಥೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಮುದ್ದಟನೂರು ಗ್ರಾಮದ ಸುಮಾರು ಹತ್ತಾರು ವರ್ಷಗಳಿಂದ ಬೈಲಾಟ ರಂಗಮಂದಿರವನ್ನೇ ನಂಬಿಕೊಂಡು ಜೀವಿಸುತ್ತಿರುವ ಹೊಸೂರಪ್ಪ ಇವರ ಬದುಕಿನ ವಾಸ್ತವ.
*ಜೀವನ :*
ತಂದೆ ಎಲ್ಲಪ್ಪ ತಾಯಿ ಈರಮ್ಮ ಇವರ ಪುತ್ರನಾದ ಈತ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಮುದ್ದಟನೂರು ಗ್ರಾಮದ ನಿವಾಸಿ.1960 ಜೂನ್ ತಿಂಗಳ 6ನೇ ತೇದಿಯಲ್ಲಿ ಜನಿಸಿದ ಇವರು ಹತ್ತನೇ ತರಗತಿವರೆಗೆ ವಿದ್ಯಾಭ್ಯಾಸ ಮುಗಿಸಿ,
ಕಲೆಯನ್ನು ಕರಗತ ಮಾಡಿಕೊಂಡು ಪರಕಾಯ ಪ್ರವೇಶಿಸಿ ಬಾಯಲಾಟಕ್ಕೆ ಮನಸೋತರು.ಮನಸ್ಸು ಇಮ್ಮಡಿಸಿಗೊಂಡ ಇವರು ಆನಂತರ ಕಥೆ ಪುಸ್ತಕ, ಸಾಹಿತ್ಯ, ಸಾಮಾಜಿಕ ಚಳುವಳಿ, ಸಾಮಾಜಿಕ ಚಿಂತನೆಕಾರರ ಪುಸ್ತಕ ಓದುವುದರ ಮೂಲಕ ನಾಟಕ ಬಯಲಾಟಕ್ಕೆ ಒಳಗಾದರು. ಈ ಮೂಲಕ ಹತ್ತಾರು ಜನ ಪಾತ್ರಧಾರಿಗಳಿಗೆ ಕಲೆ ಅಭಿನಯ, ಮಾತಿನ ಗಾಂಭೀರ್ಯತೆ ತೋರ್ಪಡಿಸುವುದರ ಮೂಲಕ ಕಲಾವಿದರನ್ನು ಹುಟ್ಟು ಹಾಕಿದರು. ಇಷ್ಟು ಮಾತ್ರವಲ್ಲ ಬೈಯಲಾಟದಲ್ಲಿ ಅಭಿವಯಿಸುವವರ ಅಕ್ಷರ ಜ್ಞಾನವೇ ಗೊತ್ತಿಲ್ಲದ ಪಾತ್ರಧಾರಿಗಳಿಗೆ ಹಿನ್ನೆಲೆ
ಹೇಳಿಕೊಡುವುದರ ಮೂಲಕ ಕಲಾವಿದರ ಮನ ಗೆದ್ದರು. ಆನಂತರ ಪ್ರೇಕ್ಷಕರ ಮನದಾಳದಲ್ಲಿ ಅಭಿನವ ಭಾರ್ಗವ ಎನಿಸಿಕೊಂಡರು.
*ಕಲೆಗೆ ಹಾದಿ :*
ಈ ರೀತಿ ನಾನಾ ಕಲಾವಿದರನ್ನು ಸೃಷ್ಟಿಸುವ ಮೂಲಕ ಬಳ್ಳಾರಿ ಜಿಲ್ಲೆಯ ಸಿರಿಗೇರಿ, ಕುರುಗೋಡು, ಕಂಪ್ಲಿ, ಎಂ.ಸೂಗೂರು, ಎಮ್ಮಿಗನೂರು, ವೆಂಕಟಪುರ, ಬುಕ್ಕಸಾಗರ, ಕುಡುತಿನಿ, ಸಿದ್ದಮ್ಮನಹಳ್ಳಿ, ಮಾತ್ರವಲ್ಲದೆ ಕರ್ನಾಟಕ ರಾಜ್ಯ ಸರ್ಕಾರದ ಬಯಲಾಟ ಅಕಾಡೆಮಿ, ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ತು, ಹಂಪಿ ಉತ್ಸವದಲ್ಲಿ ಮಾತ್ರವಲ್ಲದೆ ಆಂಧ್ರದ ಗಡಿಭಾಗದಲ್ಲಿಯೂ ಕೂಡ ತಮ್ಮ ಕಲಾ ಪ್ರದರ್ಶನವನ್ನು ಸಾಧಿಸಿ ತೋರಿಸಿದ್ದಾರೆ.
*ಪ್ರದರ್ಶನ :*
ಭಕ್ತ ಸುಧಾಮ ಕಾಳಗ ಬಯಲಾಟದಲ್ಲಿ ಸುಧಾಮನ ಪಾತ್ರ, ಪಾರ್ಥ ವಿಜಯದಲ್ಲಿ ಜಟಾಸುರನ ಪಾತ್ರ ಹೀಗೆ ಸುಮಾರು 20ಕ್ಕೂ ಹೆಚ್ಚು ಬಯಲಾಟ ಪ್ರದರ್ಶನ ನೀಡಿ ಹತ್ತಾರು ಜನ ಕಲಾವಿದರನ್ನು ಸೃಷ್ಟಿಸಿ ಅವರೊಳಗೆ ಒಬ್ಬ ಕಲಾವಿದನಾಗಿ ಪಾತ್ರವಹಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.
**ದೊರೆಯದ ಸರ್ಕಾರಿ ಸವಲತ್ತು*
ಇಲ್ಲಿಯವರೆಗೂ ಇಂತಹ ಕಲಾವಿದರು ಕಳೆದ ಹತ್ತಾರು ವರ್ಷಗಳಿಂದ ಹತ್ತಾರು ಬಾರಿ ಕಲಾವಿದರ ಪ್ರೋತ್ಸಾಹ ಧನ ಇತರೆ ಕಲಾವಿದರಿಗೆ ಕೊಡಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಡವಿದ್ದು ನ್ಯಾಯ ಸಮ್ಮತವಲ್ಲ ಎಂಬುದು ಎಲ್ಲಾ ಕಲಾಭಿಮಾನಿಗಳ ಅಭಿಪ್ರಾಯವಾಗಿದೆ.
*ಕಷ್ಟದ ಜೀವನ :*
ಬಯಲಾಟದ ಪ್ರದರ್ಶನ ನೀಡಲು, ಹಗಲು ರಾತ್ರಿ ಎನ್ನದೆ ನಿದ್ದೆಗೆಟ್ಟು ಪ್ರೇಕ್ಷಕರನ್ನು ಹುರಿದುಂಬಿಸ ಬೇಕಾದ್ದು, ಕಲಾವಿದನ ಕರ್ತವ್ಯ. ಅದೇ ರೀತಿ ಕಲಾವಿದನಿಗೆ ಪ್ರೋತ್ಸಾಹ ನೀಡಬೇಕಾದ್ದು ಹಿನ್ನಲೆ ಗಾಯಕ, ತಾಳೆ ಮದ್ದಾಳಿಕೆ ಪ್ರಮುಖವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಮಬ್ಬು ಕಣ್ಣಿನಲ್ಲಿಯೂ ಸಹ ತಾಳವನ್ನು ಬಿಚ್ಚಿ ಬಡಿಯುವುದರ ಮೂಲಕ ನಿದ್ದೆ ಕೆಟ್ಟವರನ್ನು ಎಬ್ಬಿಸಿ ಬೈಲಾಟಕ್ಕೆ ಸ್ಪೂರ್ತಿ ನೀಡುವವರೇ ತಾಳ ಹಿನ್ನಲೆ ಗಾಯಕರು.
*ಹೇಳಿಕೆ*
ಕಳೆದ 38 ವರ್ಷಗಳಿಂದ ನಾನು ಕಲಾವಿದನಾಗಿ ಮಾತ್ರವಲ್ಲ, ನಾನಾ ಕಲಾವಿದರನ್ನು ಹುಟ್ಟು ಹಾಕಿ ಮುದ್ದಟನೂರು ಗ್ರಾಮದ ಶ್ರೀ ಬೀರಲಿಂಗೇಶ್ವರ ಸಾಂಸ್ಕೃತಿಕ ಕಲಾ ಟ್ರಸ್ಟ್ ಸಮಿತಿ ಮೂಲಕ ನೂರಾರು ಕಲಾ ಪ್ರದರ್ಶನವನ್ನು ನೀಡಿದ್ದೇವೆ. ಆದರೂ ಕೂಡ ಇಂದಿನವರೆಗೂ ನನಗೆ 66 ವರ್ಷವಾದರೂ ಕೂಡ ವೃದ್ಧಾಪ್ ವೇತನ ವಿಲ್ಲ, ಕಲಾವಿದನೆಂದು ಗುರುತಿಸಿ ಕನ್ನಡ ಸಂಸ್ಕೃತಿ ಇಲಾಖೆಯಿಂದ ವೇತನ ಸಹ ಸಿಕ್ಕಿಲ್ಲ. ಇದರಿಂದ ನನಗೆ ಬಹಳ ನೋವು ಉಂಟಾಗಿದೆ. ಕರ್ನಾಟಕ ಸರ್ಕಾರದಿಂದ ಕಲಾವಿದನಿಗೆ ದೊರೆಯಬೇಕಾದ ಮೂಲಭೂತ ಸೌಲಭ್ಯ ದೊರೆಯಬೇಕೆಂಬುದೇ
ನನ್ನ ಆಶಯ. ಇದು ನನಗೆ ಮಾತ್ರವಲ್ಲ. ನನ್ನಂತಹ ಎಲ್ಲಾ ಕಲಾವಿದರಿಗೆ ಮಾಡಿದ ಅನ್ಯಾಯವಾಗುತ್ತದೆ. ಕನ್ನಡ ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ ಅರ್ಹ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಬೇಕಾಗಿದೆ.
ಹೊಸೂರಪ್ಪ. ಬಯಲಾಟ ಕಲಾವಿದ ಮುದ್ದಟನೂರು.
*ಹೇಳಿಕೆ :*
ನಾನು ಕೆಲವು ಬಾರಿ ಸಿರಿಗೇರಿ ಸುತ್ತಮುತ್ತಲಿನ ಬಯಲಾಟ ರಂಗಮಂದಿರ ಭೇಟಿ ನೀಡಿದ್ದೇನೆ ಆದರೆ ತುರ್ತು ಕಾರಣಗಳಿಂದಾಗಿ ಇಂತಹ ಕಲಾವಿದರನ್ನು ಗುರುತಿಸಲು ಸಾಧ್ಯವಾಗಿಲ್ಲ. ಅವರ ಮೂಲ ದಾಖಲಾತಿ ನಮ್ಮ ಬಳ್ಳಾರಿ ಕೇಂದ್ರಾಡಳಿತಕ್ಕೆ ಒಪ್ಪಿಸಿದ್ದಲ್ಲಿ ಅವರಿಗೆ ದೊರೆಯಬೇಕಾದ ಪ್ರೋತ್ಸಾಹ ಧನ ಸರ್ಕಾರದ ಪ್ರಶಸ್ತಿ ಒದಗಿಸಲು ಸಿದ್ಧರಿದ್ದೇವೆ.
ನಾಗರಾಜ್ ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕರು ಬಳ್ಳಾರಿ.






