ಸಿರಿಗೇರಿ ಸುದ್ದಿ ಮೇ 28:ಗ್ರಾಮದ ವ್ಯಾಪ್ತಿಯ ಸಿರಿಗೇರಿ, ಮುದ್ದಟನೂರು, ಚನ್ನಪಟ್ಟಣ, ಉತ್ತನೂರು, ಕರೂರು, ಶಾನವಾಸಪುರ ಸೇರಿದಂತೆ ಸುಮಾರು ಹತ್ತಾರು ಹಳ್ಳಿಗಳಲ್ಲಿ ಮುಸ್ಲಿಂ ಬಾಂಧವರು ಬುಧವಾರ ಮತ್ತುಗುರುವಾರ ಬಕ್ರೀದ್ ಹಬ್ಬವನ್ನು ಸಂಭ್ರಮ ಸಡಗರ ಹಾಗೂ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಬುಧವಾರ ಹಿರಿಯರ ನೆನಪನ್ನು ಜ್ಞಾಪಿಸುವ ಹಿರಿಯರ ಹಬ್ಬವನ್ನು ಆಚರಿಸಿಕೊಂಡರು.
ಮರುದಿನ ಬೆಳಗಿನ ಜಾವ ಸಮ ವಸ್ತ್ರದೊಂದಿಗೆ ಸಿದ್ಧತೆಗೊಂಡ ಮುಸ್ಲಿಂ ಬಾಂಧವರು ಮಸೀದಿಗೆ ತೆರಳಿ ಆನಂತರ ಮುಖ್ಯರಸ್ತೆಯಿಂದ ಈದ್ಗಾ ಮೈದಾನಕ್ಕೆ ತೆರಳಿದರು. ಇದೇ ವೇಳೆ ಮುಸ್ಲಿಂ ಧರ್ಮ ಗುರುಗಳು ಅಲ್ಲಾನ ಕುರಿತು ಶುಭ ಸಂದೇಶ ನೀಡಿದರು.
ಈ ವೇಳೆ ಪ್ರಮುಖರಾದ ಮುರ್ಷಿಧ ಅಹ್ಮದ್, ಭಾಷಾ, ಡಾ: ಖಾದ್ರಿ ಸಾಬ್, ಅನ್ವರ್ ಬಾಷ ಸೇರಿದಂತೆ ನೂರಾರು ಜನ ಮುಸ್ಲಿಂ ಬಾಂಧವರು ಇದ್ದರು. ಬಕ್ರೀದ್ ಹಬ್ಬದ ಆಚರಣೆಯಂತೆ ತ್ಯಾಗ ಬಲಿದಾನದ ನೆನಪಿಗಾಗಿ ಭಿಕ್ಷಾದಿಗಳಿಗೆ ತಮ್ಮ ಕೈಲಾದ ಸಹಾಯ ನೀಡಿ ವಿಶೇಷತೆ ಮರೆದರು.






